ಪ್ರಶಸ್ತಿಗಳು

WhatsApp Image 2025-02-14 at 22.22.14

ಸೇವೆಗೆ ಹರಸಿ ಬಂದ ಪ್ರಶಸ್ತಿಗಳು

ವ್ಯಸನಿಗಳ ಸೇವೆ ಮಾಡುತ್ತಿರುವುದೇ ನನಗೆ ದೊರೆತಿರುವ ದೊಡ್ಡ ಪ್ರಶಸ್ತಿ- ಬಸವಣ್ಣ

ಬಸವಣ್ಣ ಅವರು ಪ್ರಶಸ್ತಿ, ಪುರಸ್ಕಾರಗಳ ಹಿಂದೆ ಎಂದೂ ಹೋದವರಲ್ಲ. ವ್ಯಸನಿಗಳ ಸೇವೆ ಮಾಡುತ್ತಿರುವುದೇ ನನಗೆ ದೊರೆತಿರುವ ದೊಡ್ಡ ಪ್ರಶಸ್ತಿ ಎಂದು ಭಾವಿಸಿ ಎಲೆ ಮರೆ ಕಾಯಿಯಂತೆ ಕಾಯಕ ಮಾಡುತ್ತಿರುವವರು. ಆದರೆ  ವ್ಯಸನಿಗಳನ್ನು ಅವರ ಸಮಸ್ಯೆಯಿಂದ ಹೊರತರುತ್ತಿರುವ ಕಾರ್ಯದಲ್ಲಿ ನಿಸ್ವಾರ್ಥದಿಂದ, ಅವಿರತವಾಗಿ ಮಾಡುತ್ತಿರುವ ಅವರ ಸೇವೆಯನ್ನು ಗುರುತಿಸಿ ಸರ್ಕಾರ, ಹಲವು ಸಂಘ, ಸಂಸ್ಥೆಗಳು ಪ್ರಶಸ್ತಿಗಳನ್ನು ನೀಡಿ ಪುರಸ್ಕರಿಸಿವೆ.

ವಿಶೇಷವಾಗಿ ಕರ್ನಾಟಕ ಸರ್ಕಾರದ ಮದ್ಯಪಾನ ಸಂಯಮ ಮಂಡಳಿಯಿಂದ 2021-22ನೇ ಸಂಯಮ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಪ್ರಶಸ್ತಿನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಶ್ರೀ ವೀರೇಂದ್ರ ಹೆಗ್ಗಡೆ ಅವರು ಹಾಗೂ ಇಳಕಲ್ ಮಠದ ಶ್ರೀ ಮಹಾಂತ ಸ್ವಾಮಿಗಳಿಗೆ ನೀಡಿರುವ ಪ್ರಶಸ್ತಿಯಾಗಿದೆ. ಅಂತಹ ಮಹಾನೀಯರಿಗೆ ನೀಡಿದ ಪ್ರಸ್ತಿಯನ್ನು ಬಸವಣ್ಣ ಅವರ ಅವಿರತ ಸೇವೆ ಗುರುತಿಸಿ ಪ್ರಶಸ್ತಿ ನೀಡಿ, ಗೌರವಿಸಿದೆ. ಜತೆಗೆ ಶಿಬಿರದಲ್ಲಿ ಪಾಲ್ಗೊಂಡು ವ್ಯಸನದಿಂದ ಮುಕ್ತರಾದವರೇ ಸೇರಿಕೊಂಡು ಮಾಡಿದ ಕಿರುಚಿತ್ರಕ್ಕೆ ರಾಜ್ಯ ಮಟ್ಟದ ಪ್ರಥಮ ಪ್ರಶಸ್ತಿ ಸಿಕ್ಕಿರುವುದೂ ಮತ್ತೊಂದು ಗರಿ.