ನಮ್ಮ ಬಸವಣ್ಣ

ಎಸ್. ಬಸವರಾಜು

ಸಂಸ್ಥಾಪಕರು, ಬಸವಮಾರ್ಗ ಫೌಂಡೇಷನ್ ಚೇರ್ಮನ್, ಇಂಡಿಯನ್ ಟಿವಿ

ಮೈಸೂರಿನ ಹೆಬ್ಬಾಳದ ರಿಂಗ್ ರಸ್ತೆಯಲ್ಲಿ ಇರುವ ಬಸವಮಾರ್ಗ ಇಡೀ ರಾಜ್ಯಾದ್ಯಂತ ಹೆಸರು ಮಾಡಿದ ಉತ್ಕೃಷ್ಟ ವ್ಯಸನಮುಕ್ತ ಕೇಂದ್ರ. ಇದು ಹುಟ್ಟಿದ್ದು ಘನವಾದ ಉದ್ದೇಶ ಇಟ್ಟುಕೊಂಡು, ಮುನ್ನಡೆಯುತ್ತಿರುವುದು ಸಮಾಜಕ್ಕೆ ನಮ್ಮ ಕೈಲಾದ ಸಹಾಯ ಮಾಡಬೇಕು ಎನ್ನುವ ಅಭಿಲಾಷೆಯಿಂದ. ಇಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ವ್ಯಸನಿಗಳನ್ನು ತಮ್ಮ ಮನೆಯ ಸದಸ್ಯರಂತೆ ಕಾಣುತ್ತಾ, ಅವರ ಬದುಕಲ್ಲಿ ಬೆಳಕು ತುಂಬುವ ಕೆಲಸ ಮಾಡುತ್ತಾ ಬರುತ್ತಿದ್ದಾರೆ. ಇದರ ನಾಯಕತ್ವ ವಹಿಸಿಕೊಂಡಿರುವ ಬಸವಣ್ಣ ಅವರು ಎಲ್ಲರಿಗೂ ಪ್ರೇರಣೆಯಾಗಿ ನಿಂತಿದ್ದಾರೆ.

ಬಸವಮಾರ್ಗ ಸಂಸ್ಥೆಯಿಂದ ಇದುವರೆಗೆ 47 ಉಚಿತ ಕುಡಿತ ಬಿಡಿಸುವ ಶಿಬಿರವನ್ನು ಆಯೋಜನೆ ಮಾಡಲಾಗಿದೆ. 10 ಸಾವಿರಕ್ಕೂ ಹೆಚ್ಚು ಜನರು ಈ ಶಿಬಿರದ ಪ್ರಯೋಜನ ಪಡೆದಿದ್ದಾರೆ. ಅದರಲ್ಲಿ ಸಾವಿರಾರೂ ಜನರು ಕುಡಿತದ ಚಟದಿಂದ ಸಂಪೂರ್ಣವಾಗಿ ಹೊರ ಬಂದು ಉತ್ತಮ ಜೀವನ ಸಾಗಿಸುತ್ತಿದ್ದಾರೆ. ವ್ಯಸನಿಗಳು ಇಂದು ಹೆಂಡತಿ, ಮಕ್ಕಳ ಜತೆ ಉತ್ತಮ ಜೀವನ ಮಾಡುತ್ತ ಇತರ ವ್ಯಸನಿಗಳಿಗೆ ಮಾದರಿಯಾಗಿದ್ದಾರೆ. ಆ ಮೂಲಕ ಬಸವಣ್ಣ ಅವರು ಹಾಗೂ ಬಸವಮಾರ್ಗ ಸಂಸ್ಥೆ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮ ವಹಿಸಿ ದುಡಿಯುತ್ತಿದೆ.

WhatsApp Image 2025-02-02 at 20.13.50 (2)

ಹಲವರ ಬದುಕಿಗೆ ನೆರವಾಗಿ ನಿಂತಿರುವ ಕಲ್ಪವೃಕ್ಷ

ಸಮಾಜ ಸೇವೆ, ವ್ಯಸನಮುಕ್ತ ಸಮಾಜ ನಿರ್ಮಾಣದ ಕನಸನ್ನು ಇಟ್ಟುಕೊಂಡು ಮುಂದೆ ಸಾಗುತ್ತಿರುವ ಎಸ್.ಬಸವರಾಜು ಅವರು ಮೈಸೂರು ನಗರದ ಕೆ.ಜಿ.ಕೊಪ್ಪಲಿನ ಎಂ.ಸೋನಿ ಕರೀಗೌಡ ಮತ್ತು ಬಸಮ್ಮ ದಂಪತಿಗಳ ಮೊಮ್ಮಗ. ತಂದೆ ನಿವೃತ್ತ ರೆವಿನ್ಯೂ ಅಧಿಕಾರಿ ಕೆ.ಶ್ರೀನಿವಾಸ್. ತಾಯಿ ಚೆನ್ನಮ್ಮ. ಇವರ ಎರಡನೇ ಮಗನಾಗಿರುವ ಬಸವಣ್ಣ ಅವರು ಓದಿದ್ದು 10ನೇ ತರಗತಿ ಮಾತ್ರ. 10ನೇ ತರಗತಿಯಲ್ಲಿ ಇದ್ದ ಸಮಯದಲ್ಲಿ ಕೆಲ ಕೆಟ್ಟ ಸ್ನೇಹಿತರ ಸಹವಾಸ ಮತ್ತು ಕೆಟ್ಟ ವಾತಾವರಣಕ್ಕೆ ಸಿಲುಕಿದ ಬಸವಣ್ಣ ಅವರು ಬಾಲ್ಯಾವಸ್ಥೆಯಲ್ಲೇ ಕುಡಿತ ಚಟಕ್ಕೆ ಬಲಿಯಾಗುತ್ತಾರೆ. ಇದಾದ ಬಳಿಕ ಬಸವಣ್ಣ ಅವರು ಮಾಡಿದ ವ್ಯಾಪಾರ-ವ್ಯವಹಾರದಲ್ಲಿ ನಷ್ಟ ಉಂಟಾಗಿ ಸಂಪೂರ್ಣವಾಗಿ ವ್ಯಸನಕ್ಕೆ ದಾಸರಾಗುತ್ತಾರೆ.

ಇದೇ ರೀತಿ ಸಾಗುತ್ತಿದ್ದ ಪಯಣದಲ್ಲಿ 2015ರಲ್ಲಿ ಬದಲಾವಣೆ ಪರ್ವ ಶುರುವಾಗುತ್ತದೆ. ಈ ಸಮಯದಲ್ಲಿ ವ್ಯಸನಕ್ಕೆ ದಾಸರಾದ ವ್ಯಕ್ತಿಗಳನ್ನು ವ್ಯಸನಮುಕ್ತ, ಪುನರ್ವಸತಿ ಕೇಂದ್ರಗಳಿಗೆ ಸೇರಿಸುತ್ತಾರೆ. ಅವರನ್ನು ಕುಡಿತದ ದಾಸ್ಯದಂದ ಹೊರ ತರವ ಕೆಲಸ ಪ್ರಾರಂಭ ಮಾಡುತ್ತಾರೆ. ಇದರ ಜತೆ ಜೊತೆ ಜೊತೆಗೆ ವ್ಯಸನದಿಂದ ಹೊರ ಬಂದವರಿಗೆ ವ್ಯಾಪಾರ, ವ್ಯವಹಾರ ಮಾಡಲು ಆರ್ಥಿಕವಾಗಿ ಸಹಾಯ ಮಾಡುತ್ತಾರೆ. ಕುಡಿತ ಬಿಟ್ಟ ಅವರ ಬದಲಾವಣೆಯೇ ಬಸವಣ್ಣ ಅವರಿಗೆ ಸ್ಪೂರ್ತಿಯಾಗುತ್ತದೆ. ಇದರಿಂದ ತಮ್ಮಲ್ಲೂ ಕುಡಿತ ಬಿಡುವ ಚಲ, ಹಠ ಹೆಚ್ಚಾಗುತ್ತದೆ. ಬಳಿಕ ಈತರ ಚಟಕ್ಕೆ ಬಲಿಯಾದ ವ್ಯಕ್ತಿಗಳಿಗೆ ಪರಿಹಾರದ ಮಾರ್ಗ ಕಲ್ಪಿಸಿಕೊಡಬೇಕು ಎಂದು ನಿರ್ಧರಿಸಿದ ಬಸವಣ್ಣ ಅವರು 27/10/2019 ರಲ್ಲಿ ಉಚಿತವಾಗಿ ಕುಡಿತ ಬಿಡಿಸುವ ಶಿಬಿರವನ್ನು ಆಯೋಜನೆ ಮಾಡುತ್ತಾರೆ.

ಆತ್ಮಸಾಕ್ಷಿಗೆ ಹೊಡೆತ : ಕುಡಿತದಿಂದ ಹೊರಬಂದರು ಬಸವಣ್ಣ

ಇಲ್ಲಿ ಗಮನಿಸಬೇಕಾದ ಮುಖ್ಯವಾದ ಅಂಶವೊAದಿದೆ. ಅದೇನೆಂದರೆ ಬಸವಣ್ಣ ಅವರು ಶಿಬಿರದ ಹಿಂದಿನ ದಿನದ ವರೆಗೂ ಕುಡಿಯುತ್ತಿರುತ್ತಾರೆ. ಈ ಹಂತದಲ್ಲೇ ಅವರ ಮನಸ್ಸಿನಲ್ಲಿ ಒಂದು ಪ್ರಶ್ನೆ ಬರುತ್ತದೆ. ನಾನು ಕುಡಿದು, ಇನ್ನೋಬ್ಬರು ಕುಡಿಯಬೇಡಿ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಆತ್ಮಸಾಕ್ಷಿ ಪ್ರಶ್ನೆ ಮಾಡುತ್ತದೆ. ಕೊನೆಗೆ ತಾವೇ ಆಯೋಜಿಸಿದ್ದ ಶಿಬಿರದಲ್ಲೇ ತಾವು ಕೂಡ ಒಬ್ಬ ಶಿಸ್ತಿನ ಶಿಬಿರಾರ್ಥಿಯಾಗಿ ಪಾಲ್ಗೊಂಡು ಕೊನೆಗೂ 17 ವರ್ಷಗಳ ಕುಡಿತ ದಾಸ್ಯದಿಂದ ಹೊರ ಬರುತ್ತಾರೆ ಬಸವಣ್ಣ. ಕೊನೆಗೆ ತಮಗೆ ಸಿಕ್ಕ ಈ ಅವಕಾಶ ಪ್ರತಿಯೊಬ್ಬ ವ್ಯಸನಿಗೂ ಸಿಗಬೇಕು ಎನ್ನುವ ದೊಡ್ಡ ಸಂಕಲ್ಪ ಮಾಡಿ "ಬಸವಮಾರ್ಗ" ಎನ್ನುವ ಸಂಸ್ಥೆಯನ್ನು ಕಟ್ಟುತ್ತಾರೆ.

ಬಸವಮಾರ್ಗ ಸಂಸ್ಥೆಯಿಂದ ಇದುವರೆಗೆ 47 ಉಚಿತ ಕುಡಿತ ಬಿಡಿಸುವ ಶಿಬಿರವನ್ನು ಆಯೋಜನೆ ಮಾಡಲಾಗಿದೆ. 10 ಸಾವಿರಕ್ಕೂ ಹೆಚ್ಚು ಜನರು ಈ ಶಿಬಿರದ ಪ್ರಯೋಜನ ಪಡೆದಿದ್ದಾರೆ. ಅದರಲ್ಲಿ ಸಾವಿರಾರೂ ಜನರು ಕುಡಿತದ ಚಟದಿಂದ ಸಂಪೂರ್ಣವಾಗಿ ಹೊರ ಬಂದು ಉತ್ತಮ ಜೀವನ ಸಾಗಿಸುತ್ತಿದ್ದಾರೆ. ವ್ಯಸನಿಗಳು ಇಂದು ಹೆಂಡತಿ, ಮಕ್ಕಳ ಜತೆ ಉತ್ತಮ ಜೀವನ ಮಾಡುತ್ತ ಇತರ ವ್ಯಸನಿಗಳಿಗೆ ಮಾದರಿಯಾಗಿದ್ದಾರೆ. ಆ ಮೂಲಕ ಬಸವಣ್ಣ ಅವರು ಹಾಗೂ ಬಸವಮಾರ್ಗ ಸಂಸ್ಥೆ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮ ವಹಿಸಿ ದುಡಿಯುತ್ತಿದೆ.